ಪುಟ್ಟ ಮಕ್ಕಳು ನಕ್ಕು ನಲಿದಾಡುವ,
ಕನ್ನಡವನ್ನು ತಮ್ಮದೇ ಆದ ಶೈಲಿಯಲ್ಲಿ
ಮಾತನಾಡಿ ಎಲ್ಲರನ್ನೂ ಅಚ್ಚರಿಗೊಳಿಸುವ
ಗುರುಕುಲ, ಈ ನಮ್ಮ "ಈಸ್ಟ್ ವಿಂಡ್ಸರ್ ಕನ್ನಡ ಶಾಲೆ"
ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು
ಸಂಪೂರ್ಣ ಶ್ರದ್ಧೆಯಿಂದ ನಮ್ಮ ನಾಡ ಭಾಷೆಯನ್ನು
ಪ್ರೀತಿಯಿಂದ ಕಲಿತು, ಓದಿ, ಬರೆದು, ಹಾಡಿ, ಮಾತನಾಡುವುದೇ
ನಮ್ಮೆಲ್ಲ ಗುರುಗಳ ಹೆಮ್ಮೆ.
"ಕನ್ನಡವೇ ಸತ್ಯ, ಕನ್ನಡವೇ ನಿತ್ಯ"
ಕಲಿಸೋಣ ಬಾರಾ
ಕಲಿಯೋಣ ಬಾರಾ
ಅಮೆರಿಕನ್ನಡ ಈ-ಸ್ಕೂಲ್,
ಬನ್ನಿ,ಕಲಿಯೋಣ, Its's cool !!
ಸ್ನೇಹ ಸೌಹಾರ್ದತೆಯ ಸಂಕೋಲೆ
ನಮ್ಮ ಈಸ್ಟ್ ವಿಂಡ್ಸರ್ ಶಾಲೆ
ಕಲಿಯೋಕೆ ಕೋಟಿ ಭಾಷೆ...
ಪ್ರೀತಿಸೋಕೆ ಒಂದೇ ಭಾಷೆ...
ಕನ್ನಡ... ಕನ್ನಡ...
ಕನ್ನಡ ಕಲಿ
ಎಂದೆಂದೂ ನಗುತ ನಲಿ
ಹೊರನಾಡಲ್ಲಿ ಕನ್ನಡದ ಕಂಪು
ಚಿಣ್ಣರ ಅಂಗಳ ತಂಪು
ಮನ ಮನದಲ್ಲಿ ಕನ್ನಡ...
ಮನೆ ಮನೆಯಲ್ಲಿ ಕನ್ನಡ...
ಕನ್ನಡ ಕಲಿ
ಮನಸಿನಲ್ಲಿ ಸಿರಿ
ನೆನಪಿನಲ್ಲಿ ಉಳಿ
ಹರುಷದಲ್ಲಿ ನಲಿ
ಅ ಆ ಇ ಈ... ಕನ್ನಡದಾ ಅಕ್ಷರ ಮಾಲೆ
ಕಲಿಸುತ ಕಲಿಯುವ
ಸಿರಿಗನ್ನಡ ನುಡಿಯ